ಶ್ರೀ ಕೃಷ್ಣನಿಗೆ ಹದಿನಾರು ಸಾವಿರದ ಒಂದು ನೂರ ಎಂಟು ಪತ್ನಿಯರು. ಅವರಲ್ಲಿ ಎಂಟು ಮಂದಿ 'ಅಷ್ಟ ಮಹಿಷಿ' ಯರಂದೆ ಕರೆಯಲ್ಪಡುವರು. ಅವರೆಲ್ಲರಿಗೂ ತಲಾ ಹತ್ತು ಮಕ್ಕಳು.
೧. ರುಕ್ಮಿಣಿ: ಪ್ರದ್ಯುಮ್ನ, ಚಾರುದೇಷ್ಣ, ಸುದೇಷ್ಣ, ಚಾರುದೇಹ, ಸುಚಾರು, ಚಾರುಗುಪ್ತ, ಭದ್ರಚಾರು, ಚಾರುಚಂದ್ರ, ವಿಚಾರು ಮತ್ತು ಚಾರು.
೨. ಸತ್ಯಭಾಮ: ಭಾನು, ಸುಭಾನು, ಸ್ವರ್ಭಾನು, ಪ್ರಭಾನು, ಭಾನುಮನ್, ಚಂದ್ರಭಾನು, ಬೃಹದ್ಭಾನು, ಅತಿಭಾನು, ಶ್ರೀಭಾನು ಮತ್ತು ಪ್ರತಿಭಾನು.
೩. ಜಾಂಬವತಿ: ಸಾಂಬ, ಸುಮಿತ್ರ, ಪುರುಜಿತ್, ಶತಜಿತ್, ಸಹಸ್ರಜಿತ್, ವಿಜಯ, ಚಿತ್ರಕೇತು, ವಸುಮಾನ್, ದ್ರವಿಕ ಮತ್ತು ಕ್ರತು.
೪. ನಗ್ನಜಿತಿ: ವೀರ, ಚಂದ್ರ, ಅಶ್ವಸೇನ, ಚಿತ್ರಗು, ವೇಗವಾನ್, ವೃಷ,ಆಮ, ಶಂಕು, ವಸು ಮತ್ತು ಕುಂತಿ.
೫. ಕಾಳಿಂದಿ: ಶ್ರುತ,ಕವಿ, ವೃಷ, ವೀರ, ಸುಬಾಹು, ಭದ್ರ, ಶಾಂತಿ, ದರ್ಶ, ಪೂರ್ಣಮಾಸ ಮತ್ತು ಸೋಮಕ.
೬. ಮದ್ರಾ: ಪ್ರಘೋಷ, ಗಾತ್ರವಾನ್, ಸಿಂಹ, ಬಲ, ಪ್ರಬಲ, ಊರ್ಧಗ, ಮಹಾಶಕ್ತಿ, ಸಹಾ, ಓಜ ಮತ್ತು ಅಪರಾಜಿತ.
೭. ಮಿತ್ರವಿಂದಾ: ವೃಕ, ಹರ್ಷ, ಅನಿಲ, ಗೃಧ್ರ, ವರ್ಧನ, ಉನ್ನದ, ಮಹಾಂಶ, ಪವನ, ವಹ್ನಿ ಮತ್ತು ಕ್ಷುಧಿ.
೮. ಭದ್ರಾ: ಸಂಗ್ರಾಮಜಿತ, ಬೃಹತ್ಸೇನ, ಸುರ, ಪ್ರಹರಣ, ಅರಿಜಿತ್, ಜಯ, ಸುಭದ್ರ, ವಾಮ, ಆಯುರ್ ಮತ್ತು ಸತ್ಯಕ.
ಇವರಷ್ಟೇ ಅಲ್ಲದೆ ಶ್ರೀಕೃಷ್ಣನಿಗೆ ರೋಹಿಣಿ ಎಂಬ ಪತ್ನಿಯಲ್ಲಿ ಹತ್ತು ಮಂದಿ ಶೂರರು ಜನಿಸಿದರು. ಜೊತೆಗೆ ಎಲ್ಲ ಹದಿನಾರು ಸಾವಿರ ಪತ್ನಿಯರಲ್ಲೂ ಹತ್ತು ಮಕ್ಕಳು ಜನಿಸಿ, ಕೃಷ್ಣನ ಮಕ್ಕಳ ಸಂಖ್ಯೆ ಲಕ್ಷವನ್ನು ಮೀರಿತು!
- ಸಹನ
ಆಧಾರ : ಭಾಗವತ