ಒಬ್ಬ ವ್ಯಕ್ತಿಯು ಪರಿಪೂರ್ಣವಾದ ತೃಪ್ತಿಯನ್ನು ಹೊಂದಲು ಕೃಷ್ಣ ಪ್ರಜ್ಞೆ ಉಳ್ಳವನಾಗಿರಬೇಕು . ಕೃಷ್ಣನಿಗಿಂತ ಶ್ರೇಷ್ಟವಾದುದೇನಿದೆ ? ಹಾಗಾಗಿ ಕೃಷ್ಣ ಪ್ರಜ್ಞೆ ಉಳ್ಳವನು ಪರಿಪೂರ್ಣವಾಗುತ್ತಾನೆ .
ಕೃಷ್ಣ ಪ್ರಜ್ಞೆಯು ಕೃಷ್ಣನಿಂದ ಬಿನ್ನವಲ್ಲ . ಕೃಷ್ಣ ಪ್ರಜ್ಞೆಯ ವ್ಯಕ್ತಿಯು ಕೃಷ್ಣನನ್ನೇ ಹೊಂದಿರುತ್ತಾನೆ . ಕೃಷ್ಣ ಪ್ರಜ್ಞೆಯಲ್ಲಿರುವನ ಭಕ್ತಿಯು ಪರಿಶುದ್ಧವಾದ್ದುದು. ಇಂತಹ ಪರಿಶುದ್ಧವಾದ ಭಕ್ತಿ ಸೇವೆಯನ್ನು ಕೃಷ್ಣನಿಗೆ ಅರ್ಪಿಸಿದಾಗ , ನಾವು ಕೃಷ್ಣನೊಂದಿಗೆ ಅನ್ಯೋನ್ಯತೆಯಿಂದ ಹಾಗು ಅಂತಿಮವಾಗಿ ಕೃಷ್ಣನ ಪ್ರೇಮವನ್ನು ಗಳಿಸಬಹುದು .
ನಾವು ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವುದರಿಂದ ನಮ್ಮ ಕಷ್ಟಗಳು ನೀವಾರಿಸುತ್ತದೆ ಮತ್ತು ಮುಕ್ತಿ ಸಿಗುತ್ತದೆ ಎಂದು ನಿರೀಕ್ಷಿಸಬಾರದು . ಯೋಗಿಗಳು ಮತ್ತು ಜ್ಞಾನಿಗಳು ಲೌಕಿಕ ಬಂಧನದಿಂದ ಮುಕ್ತರಾಗಲು ಕೃಷ್ಣನಿಗೆ ಸೇವೆ ಸಲ್ಲಿಸುತ್ತಾರೆ . ಆದರೆ, ಪರಿಶುದ್ಧವಾದ ಭಕ್ತಿಯಲ್ಲಿ ಇಂತಹ ಆಸೆಗಳಿರುವುದಿಲ್ಲ . ಕೃಷ್ಣನಿಗೆ ಪ್ರಿಯವದುದ್ದು ಈ ರೀತಿಯ 'ನನಗೆ ಲಾಭವಾಗುತ್ತದೆ ' ಎಂಬ ಯೋಚನೆಇಲ್ಲದ ನಿರ್ಮಲವಾದ ಭಕ್ತಿಯೇ ಹೊರತು ಲಾಬದಾಯಕ ವ್ಯವಹಾರವಲ್ಲ .
ಭಗವಧ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ "ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ" ,
ಅಂದರೆ - ಯಾರು ಕೃಷ್ಣ ಪ್ರಜ್ಞೆಯಲ್ಲಿ ನೆಲೆಸಿರುವನೋ ಅವನು ತೀವ್ರವಾದ ಕಷ್ಟಗಳಲ್ಲಿಯೂ ವಿಚಲಿತನಾಗುವುದಿಲ್ಲ .
ನಾನು ಕೃಷ್ಣನಿಗೆ ಸೇರಿರುವುದು . ನಾನು ಕೃಷ್ಣನ ಭಾಗ . ಹೀಗೆ ಕೃಷ್ಣ ಪ್ರಜ್ಞೆಯಲ್ಲಿ ಚಿಂತನೆ ಮಾಡಿದಾಗ ನಾವು ಕೃಷ್ಣನ ನಿವಾಸವನ್ನು (ಭಗವದ್ಧಾಮ) ಸೇರಬಹುದು ಹಾಗೂ ಪರಿಪೂರ್ಣವಾದ ತೃಪ್ತಿಯನ್ನು ಹೊಂದಬಹುದು .
।।ಶ್ರೀ ಕೃಷ್ಣಾರ್ಪಣಮಸ್ತು।।
ನಂಬಿಕೆಗಳು ಅತಿಯಾದಾಗ ಮೂಢನಂಬಿಕೆಯು ಚಿಗುರೊಡೆಯುವುದು... ಕೃಷ್ಣ ರಾಮ ಎಂಬ ದೇವರ ನಂಬುವುದಕ್ಕಿಂತ, ದೇವರ ಹೆಸರಲಿ ಮೂಡಿರುವ, ಮೂಡಲಿರುವ ಜನೋಪಕಾರಿ ವಿಷಯಗಳಿಗೆ ಮನ್ನಣೆ ನೀಡಿ, ಅದನ್ನು ಅನುಸರಿಸಿದಾಗಲೇ ನಿಜವಾದ ಶಕ್ತಿಯ ಅರಿವಾಗುವುದು... ಯಾವ ದೇವನೂ ಕಾಪಾಡಲಾರ ಆಗಲಿರುವುದ... ಯಾವ ದೇವನೂ ಬಂದಿಲ್ಲ ಆಗಿರುವುದ ತಡೆಯಲು... ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ.. ಮುಖಕಿಂತ ಮಾತು ಮುಖ್ಯ...
ReplyDeleteಜನೋಪಕಾರಿ ಎಂದರೆ ಹೇಗೆ ? ಯಾವ ವಿಧವಾದ ಜನೋಪಕಾರದ ಬಗೆಗಿನ ಮಾತು ನೀವು ಹೇಳುತ್ತಿರುವುದು ? ನಂಬಿಕೆ ಮತ್ತು ಅದರ ಪಾಲನೆಯಲ್ಲಿ ಪ್ರಮಾಣದ ಕೊರತೆ ಮತ್ತು ಅಧ್ಯಯನದಲಾಗುವ ಲೋಪದಿಂದಷ್ಟೆ ಈ ಮೂಢನಂಬಿಕೆ ಎಂಬ ಪದಕ್ಕೆ ಅರ್ಥ ಬರುವಂತದು.. ಜಗತ್ತಿನ ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣಿಭೂತನಾದ ಭಗವಂತನ ದೂಷಿಸುವುದು ನಮ್ಮ ಮಂಧಮತಿಯನು ಹಿಡಿದೆತ್ತಿ ತೋರಿಸುತ್ತದೆ.. ಈ ಮಾತು ಎಂಬುದಕ್ಕೆ ನಿರ್ಧಿಷ್ಟವಾದ ಅರ್ಥ ಬರುವುದು ನಮ್ಮ ಸಂಸ್ಕಾರದಂದಿ ಗುಣ ನಡತೆಗೂ ಇದುವೆ ಕಾರಣವಾಗಿರುವಂತದು.
ReplyDelete